ಬೆಂಗಳೂರು ಲತಾ (: ), ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತುಳು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಹಾಡಿದ್ದಾರೆ. ಚಿತ್ರಗೀತೆಗಳೇ ಅಲ್ಲದೆ, ಅಸಂಖ್ಯಾತ ಭಾವಗೀತೆ, ಭಕ್ತಿಗೀತೆ ಮತ್ತು ಜನಪದ ಗೀತೆಗಳನ್ನು ಲತಾ ಹಾಡಿದ್ದಾರೆ. == ವೈಯಕ್ತಿಕ ಜೀವನ == ಲತಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರು ಚಿಂತನಪಲ್ಲಿ ಕೃಷ್ಣಮೂರ್ತಿ ಅವರ ಬಳಿ ಸಂಗೀತ ಕಲಿತರು. ಹಾಸ್ಯ ನಟ ಟೊಮ್ಯಾಟೋ ಸೋಮು ಅವರನ್ನು ಲತಾ ಮದುವೆಯಾಗಿದ್ದರು. ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಾರಣಗಳಿಂದ ಮಾರ್ಚ್ ೨೬, ೧೯೯೦ರಂದು ನಿದ್ದೆ ಗುಳಿಗೆಗಳನ್ನು ನುಂಗಿ, ಲತಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. == ಚಿತ್ರರಂಗದಲ್ಲಿ == ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಲತಾ ಒಮ್ಮೆ ಬೆಂಗಳೂರಿನ ಪುರಭವನದ ಕಾರ್ಯಕ್ರಮದಲ್ಲಿ ಹಾಡಿದುದನ್ನು ಜಿ.ಕೆ.ವೆಂಕಟೇಶ್ ಗಮನಿಸಿದರು. ಅವರು ತಾವು ಸಂಗೀತ ನೀಡುತ್ತಿದ್ದ ಕಣ್ತೆರೆದು ನೋಡು (೧೯೬೧) ಸಿನಿಮಾದಲ್ಲಿ ಲತಾ ಅವರಿಗೆ ಅವಕಾಶ ನೀಡಿದರು. ಅನಂತರ ಡಾ.ರಾಜ್‍ಕುಮಾರ್, ಕೃಷ್ಣಕುಮಾರಿ ಅಭಿನಯಿಸಿದ್ದ ಮಹಾತ್ಮ ಕಬೀರ(೧೯೬೨) ಚಿತ್ರದ ಮೂಲಕದಲ್ಲಿ ಅನಸೂಯಾ ದೇವಿ ಅವರ ಸಂಗೀತದಲ್ಲಿ ಹಾಡಿದರು.. ಅಲ್ಲಿಂದ ಲತಾ ಅವರ ಸಿನಿಪಯಣ ಆರಂಭವಾಗಿ ನಾಲ್ಕು ದಶಕಗಳ ಕಾಲ ಮುಂದುವರೆಯಿತು. ಸತ್ಯಂ, ಘಂಟಸಾಲ, ವಿಜಯ ಭಾಸ್ಕರ್, ಎಂ.ರಂಗರಾವ್, ಜಿ.ಕೆ.ವೆಂಕಟೇಶ್, ಉಪೇಂದ್ರಕುಮಾರ್, ರಾಜನ್-ನಾಗೇಂದ್ರ ಹೀಗೆ ತಮ್ಮ ಕಾಲದ ಎಲ್ಲಾ ಸಂಗೀತ ನಿರ್ದೇಶಕರೊಂದಿಗೆ ಲತಾ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎಂ. ರಂಗರಾವ್ ಅವರು ಲತಾ ಅವರಿಗಾಗಿ ಸಾಕಷ್ಟು ಹಾಡುಗಳನ್ನು ಸಂಯೋಜಿಸಿದ್ದಾರೆ. == ಜನಪ್ರಿಯ ಹಾಡುಗಳು == ಲತಾ ಸಾಕಷ್ಟು ಹಾಡುಗಳನ್ನು ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್, ಡಾ. ರಾಜ್ ಕುಮಾರ್ ಅವರೊಂದಿಗೆ ಹಾಡಿದ್ದಾರೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿರುವ "ನೀ ಮೊದಲು ಮೊದಲು ನನ್ನ ನೋಡಿದಾಗ" (ಚೂರಿ ಚಿಕ್ಕಣ್ಣ) ಪಿ. ಬಿ. ಶ್ರೀನಿವಾಸರೊಂದಿಗೆ ಲತಾ ಹಾಡಿರುವ ಹಾಡುಗಳಲೆಲ್ಲಾ - "ವನಮಾಲಿ ವೈಕುಂಠಪತೇ"(ಪಾರ್ವತಿ ಕಲ್ಯಾಣ) ಹಾಡು ಜನಪ್ರಿಯ. ಡಾ. ರಾಜ್ ಕುಮಾರ್ ಜೊತೆ ಲತಾ ಹಾಡಿದ ಹಾಡುಗಳು ಹಿಟ್ ಎನಿಸಿವೆ. 'ಧೃವ ತಾರೆ' ಚಿತ್ರದ ಆ ಮೋಡ ಬಾನಲ್ಲಿ ತೇಲಾಡುತಾ"; 'ಜ್ವಾಲಾಮುಖಿ' ಚಿತ್ರದ "ಏಕೋ ಏನೋ ಈ ನನ್ನ ಮನವು" ಹಾಡುಗಳು ಪ್ರಸಿದ್ಧವಾಗಿವೆ. ಜ್ವಾಲಾಮುಖಿ ಚಿತ್ರದ ಮತ್ತೊಂದು ಪ್ರಸಿದ್ಧ ಹಾಡು "ಹೇಳುವುದು ಒಂದು ಮಾಡುವುದು ಇನ್ನೊಂದು". ನಾಯಕ ನಾಯಕಿಯರು ಒಬ್ಬರನ್ನೊಬ್ಬರು ಛೇಡಿಸುವ ಹಾಡಾಗಿದೆ. ಲತಾ ಅವರ ಆಲಾಪ (ಹಮ್ಮಿಂಗ್) ಜನಪ್ರಿಯವಾಗಿವೆ. ಅದೇ ಕಣ್ಣು ಚಿತ್ರದ "ನಯನ ನಯನ ಮಿಲನ" "ಆ ರತಿಯೇ ಧರೆಗಿಳಿದಂತೆ" (ಧ್ರುವ ತಾರೆ) ರಾಗತಾಳ ಚಿತ್ರದ ಎಸ್.ಪಿ.ಬಿ. ಅವರೊಂದಿಗೆ ಹಾಡಿದ "ಓ ಚೆಲುವೆ ನಾಟ್ಯದ ಸಿರಿನವಿಲೇ" ನಾಗ ಕಾಳ ಭೈರವ ಚಿತ್ರದ, ಕೆ. ಜೆ. ಯೇಸುದಾಸ್ ಅವರೊಂದಿಗೆ ಹಾಡಿದ "ನಮ್ಮೀ ಬಾಳೇ ರಸಮಯ ಕಾವ್ಯ" ಮುಂತಾದವು. ಲತಾ - ಎಸ್. ಜಾನಕಿ ಜೋಡಿ ಕೂಡ ಸಾಕಷ್ಟು ಹಾಡುಗಳನ್ನು ನೀಡಿದೆ. ಮುಖ್ಯವಾಗಿ "ಚೆಲುವರಲ್ಲಿ ಚೆಲುವ" (ಗಂಗೆ ಗೌರಿ) "ಚಂದ್ರಮುಖಿ ಪ್ರಾಣಸಖಿ" (ನಾಂದಿ) == ಹಾಡುಗಳ ಪಟ್ಟಿ == ಬೆಂಗಳೂರು ಲತಾ ಅವರು ಹಾಡಿರುವ ಆಯ್ದ ಚಿತ್ರಗೀತೆಗಳ ಪಟ್ಟಿ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಬೆಂಗಳೂರು ಲತಾ ಐ ಎಮ್ ಡಿ ಬಿನಲ್ಲಿ